Thursday, November 29, 2012

Nee Nanna Gellalare : Anuraga Yenayathu kannada lyrics

Film : Nee Nanna Gellalare
Singer : Raj Kumar
Actors : Raj Kumar,Manjula 

ಅನುರಾಗ ಏನಾಯ್ತು ಮನಸೇಕೆ ಕಲ್ಲಯ್ತು
ನಿನ್ನ ಸವಿ ಮಾತು ಕಹಿಯೆಕಾಯ್ತು
ನಿನ್ನೊಲವೆಲ್ಲಾ ಇಂದೇನಾಯ್ತು
ಅನುರಾಗ ಏನಾಯ್ತು

ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ
ನಿನ್ನ ಪ್ರೇಮೆದಿಂದ ನಾ ದೂರಾಗಿ ನನ್ನ ಕಣ್ಗಳೆಲ್ಲಾ ಕಣ್ಣೀರಾಗಿ
ಹಗಲಿರುಳೆಲ್ಲಾ ನಿನ್ನ ನೆನಪಾಯ್ತು
ಸರಸ ಹರುಷ ಬರಿ ಕನಸಾಯ್ತು
ಅನುರಾಗ ಏನಾಯ್ತು

ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ
ನಿನ್ನ ಸೇರೋ ಆಸೆ ನಾ ಕಂಡಾಗ ಜೊತೆ ಬಾಳಾಲೆಂದು ಬಳಿ ಬಂದಾಗ
ಸಿಡಿಲೊಂದೆರಗಿ ಬಡಿದಂತಾಗಿ ವಿರಸ ವಿರಹ ಗತಿ ನನಗಾಯ್ತು

ಅನುರಾಗ ಏನಾಯ್ತು ಮನಸೇಕೆ ಕಲ್ಲಯ್ತು
ನಿನ್ನ ಸವಿ ಮಾತು ಕಹಿಯೆಕಾಯ್ತು
ನಿನ್ನೊಲವೆಲ್ಲಾ ಇಂದೇನಾಯ್ತು
ಅನುರಾಗ ಏನಾಯ್ತು

*******************************************
English lyrics link here
http://mykannadalyrics.blogspot.in/2012/11/nee-nanna-gellarlare-anuraga-yenaythu.html


*******************************************
Youtube link here 

No comments:

Post a Comment